ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರಿಗೆ ಮೀಸಲಾದ ಪದವಿ ಕಾಲೇಜು. ಪ್ರಾಥಮಿಕವಾಗಿ ಕ್ಯಾಥೊಲಿಕ್ ಮಹಿಳೆಯರ ಶಿಕ್ಷಣಕ್ಕಾಗಿ ಸ್ಥಾಪನೆಯಾದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಾಗಿದೆ. ಮೂಲತಃ ಈ ಕಾಲೇಜನ್ನು ಅಪೋಸ್ಟೋಲಿಕ್ ಕಾರ್ಮೆಲ್ ಸಿಸ್ಟರ್ಸ್ 1920 ರಲ್ಲಿ ಪ್ರಾರಂಭಿಸಿದರು. ಇದು ದಕ್ಷಿಣ ಭಾರತ ದಲ್ಲಿ ಮೊದಲ ಕ್ಯಾಥೊಲಿಕ್ ಮಹಿಳಾ ಕಾಲೇಜು ಮತ್ತು ದೇಶದಲ್ಲಿ ಎರಡನೇ ಮಹಿಳಾ ಕಾಲೇಜು ಎಂಬ ಖ್ಯಾತಿ ಹೊಂದಿದೆ. == ಸ್ಥಳ == ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರ ಪದವಿ ಕಾಲೇಜು. ಭಾರತ ದೇಶದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆಯ ಬೆಂದೂರು ಪ್ರದೇಶದಲ್ಲಿದೆ. ಈ ಸಂಸ್ಥೆಯ ಪಕ್ಕದಲ್ಲೇ ಸೈಂಟ್ ಸೆಬಾಸ್ಟಿಯನ್ಸ್ ಚರ್ಚ್ ಇದೆ. == ಇತಿಹಾಸ == ಸೈಂಟ್ ಆಗ್ನೆಸ್ ಕಾಲೇಜು ೨೦೦೭ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಬೇರ್ಪಟ್ಟು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡಿತು. ಈ ವಿದ್ಯಾಸಂಸ್ಥೆಯು 1920 ರಲ್ಲಿ ಪ್ರಾರಂಭವಾಯಿತು. 1858ರಲ್ಲಿ ಫ್ರಾನ್ಸಿನಲ್ಲಿ ಅಪೋಸ್ಟೋಲಿಕ್ ಕಾರ್ಮೆಲ್ ಸಭೆಯ ಮದರ್ ವೆರೋನಿಕಾ (1823-1906) ಬಯೋನ್ನೆ ಪ್ಯಾಶನ್‍ರ ನೆನಪಿಗಾಗಿ ಸ್ಥಾಪನೆಯಾಯಿತು. ಮತ್ತು 1870 ರಲ್ಲಿ ಮಂಗಳೂರಲ್ಲಿ ಈ ಸಭೆಯನ್ನು ಸ್ಥಾಪಿಸಲಾಯಿತು. == ಬಾಹ್ಯ ಕೊಂಡಿ == ://../ == ಉಲ್ಲೇಖ == ,